New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಆರಂಭ.! ಇಲ್ಲಿದೆ ನೋಡಿ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆಯ ಮೂಲಕ ಇದೀಗ ಹೊಸ ರೇಷನ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸುವವರೆಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಯಾಕೆಂದರೆ, ಈ ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ, ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯ? ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನೂ ಎಲ್ಲಿಯವರೆಗೂ ಕಾಲಾವಕಾಶವನ್ನು ನೀಡಲಾಗಿದೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ. for more information
ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ (New Ration Card)
ಹೌದು ಸ್ನೇಹಿತರೆ, ಈಗ ನೀವು ರೇಷನ್ ಕಾರ್ಡ್ ಇಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಯಾವುದೇ ಯೋಜನೆಯ ಲಾಭವನ್ನು ಪಡೆಯುವಂತಿಲ್ಲ. ಸರ್ಕಾರದ ವತಿಯಿಂದ ಲಭ್ಯವಿರುವ ಯಾವುದೇ ಯೋಜನೆ ಪಡೆದುಕೊಳ್ಳಲು ರೇಷನ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿರುತ್ತದೆ. ಈ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ರೇಷನ್ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ಕೂಡ ಸರ್ಕಾರದಿಂದ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಾರೆ.
ಬ್ಯಾಂಕ್ ಆಫ್ ಬರೋಡ ವತಿಯಿಂದ ಪಡೆಯಿರಿ ಕಡಿಮೆ ಬಡ್ಡಿ ದರದಲ್ಲಿ 15 ಲಕ್ಷಗಳವರೆಗೆ ವೈಯಕ್ತಿಕ ಸಾಲ!
ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಿದ್ದುಪಡಿಯನ್ನು ನೀವು ಮಾಡಿಸಬೇಕಿದ್ದರೆ ಇನ್ನೂ ಕೂಡ ರೇಷನ್ ಕಾರ್ಡ್ ತಿದ್ದುಪಡಿಗಳು ಪ್ರಾರಂಭ ಆಗಿವೆ. ಆದರೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಸುಳಿವು ಇದುವರೆಗೂ ಸಿಕ್ಕಿಲ್ಲ. ಹೊಸ ರೇಷನ್ ಕಾರ್ಡ್ ಗಳಿಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಬಹುದಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಯನ್ನು ನೀವು ಎಲ್ಲಿಯವರೆಗೂ ಮಾಡಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿಯ ಕೊನೆಯ ದಿನಾಂಕ (New Ration Card)
ಇಲ್ಲಿಯವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟು ಬಹಳಷ್ಟು ದಿನಗಳಾಯ್ತು ಅಂದರೆ ಸುಮಾರು ಮೂರು ತಿಂಗಳು ಆಗಿರಬಹುದು. ಇದೀಗ ಕೆಲವು ಜನ ಸರ್ವ ಸಮಸ್ಯೆಯಿಂದ ಹಾಗೂ ಇನ್ಯಾವುದೋ ಕೆಲಸಗಳಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತವರು ಈ ಕೆಳಗೆ ನೀಡಿರುವ ದಿನಾಂಕದ ಒಳಗಾಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿದೆ.
ನೀವೇನಾದರೂ ಇನ್ನೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಲ್ಲ ಅಂತ ಅಂದರೆ ತಿದ್ದುಪಡಿ ಮಾಡಿಸಲು ಬಯಸಿದರೆ ಇದೇ ತಿಂಗಳು ಅಂದರೆ ಫೆಬ್ರವರಿ 28ನೇ ತಾರೀಕು 2025 ರವರೆಗೆ ಅವಕಾಶವನ್ನು ನೀಡಲಾಗಿದ್ದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದೆ. ನಿಮ್ಮ ಹತ್ತಿರವಿರುವ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಆನ್ಲೈನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿದೆ.
ಬೇಕಾಗುವ ದಾಖಲೆಗಳು.?
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬಯೋಮೆಟ್ರಿಕ್ ಗುರುತುಗಳು
- 6 ವರ್ಷದ ಒಳಗಿನ ಮಕ್ಕಳಲ್ಲಿ ಜನನ ಪ್ರಮಾಣ ಪತ್ರ
ಯಾವ ಬದಲಾವಣೆಗಳು ಮಾಡಿಸಬಹುದು.?
- ರೇಷನ್ ಕಾರ್ಡ್ ನಲ್ಲಿ ಸದಸ್ಯರನ್ನು ತೆಗೆದುಹಾಕುವುದು
- ರೇಷನ್ ಕಾರ್ಡ್ ನಲ್ಲಿ ಸದಸ್ಯರನ್ನು ಸೇರಿಸುವುದು
- ನ್ಯಾಯಬೆಲೆ ಅಂಗಡಿಯ ಬದಲಾವಣೆ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದು
- ಈ-ಕೆವೈಸಿ ಸಂಬಂಧಿಸಿದ ಬದಲಾವಣೆ ಮಾಡಿಸುವುದು
- ವಿಳಾಸದ ಬದಲಾವಣೆ ಮಾಡಿಸಬಹುದು
- ಕುಟುಂಬದ ಮುಖ್ಯಸ್ಥರನ್ನು ಬದಲಾವಣೆ ಮಾಡಿಸಬಹುದು
- ಇನ್ನಿತರ ಬದಲಾವಣೆಗಳನ್ನು ರೇಷನ್ ಕಾರ್ಡ್ ನಲ್ಲಿ ಮಾಡಿಸಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.?
ಸ್ನೇಹಿತರೆ ಇನ್ನೂ ಕೂಡ ಹೊಸ ರೇಷನ್ ಕಾರ್ಡ್ (New Ration Card) ಗಳಿಗೆ ಅರ್ಜಿ ಸಲ್ಲಿಸಲು ಬಹಳಷ್ಟು ಜನರು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸರ್ಕಾರಕ್ಕೆ ಗೊತ್ತೇ ಇದೆ. ಆದರೆ ಹೊಸ ರೇಷನ್ ಕಾರ್ಡ್ (New Ration Card) ಗಳಿಗೆ ಅರ್ಜಿ ಹಾಕಲು ಸದ್ಯಕ್ಕೆ ಯಾವುದೇ ರೀತಿಯ ಅವಕಾಶ ಇಲ್ಲ. ಕೇವಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿದೆ. ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಯಾವಾಗ ಬೇಕಾದರೂ ಕೂಡ ಕಾಲಾವಕಾಶವನ್ನು ಮಾಡಿಕೊಡಬಹುದಾಗಿರುತ್ತದೆ. ಆದ ಕಾರಣ ನಿಮ್ಮ ಹತ್ತಿರವಿರುವ ಆನ್ಲೈನ್ ಸೇವಾ ಕೇಂದ್ರಗಳಿಗೆ ಮಾಹಿತಿ ತಿಳಿದುಕೊಳ್ಳಿ.
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದಾಗ ನಿಮಗೆ ಈ ಜಾಲತಾಣದ ಮೂಲಕ ಅಪ್ಡೇಟ್ ಮಾಡಲಾಗುತ್ತದೆ ಆದ ಕಾರಣ ನೀವು ನಮ್ಮ ವೆಬ್ಸೈಟ್ನ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ. ಇದೇ ತರಹದ ಸುದ್ದಿಗಳನ್ನು ನೀವು ದಿನನಿತ್ಯ ಕೂಡ ಮಾಹಿತಿ ಗೋಸ್ಕರ ಓದಬಹುದಾಗಿದೆ.
1 thought on “New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಆರಂಭ.! ಇಲ್ಲಿದೆ ನೋಡಿ ಮಾಹಿತಿ.!”